Shri Siddharoodha Swamiji Math Trust Committee

Hubballi

www.srisiddharoodhaswamiji.in

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಖ್ಯಾತ ಉದ್ಯಮಿ ಶ್ರೀ ವೆಂಕಟೇಶ ರಾಯಬಾಗಿ ರವರ ಬೆಟ್ಟಿ.
Date : 17-07-2025
ದಿನಾಂಕ:-17.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ದುಬೈನ ಖ್ಯಾತ ಉದ್ದಿಮೆದಾರರಾದ ಶ್ರೀ ವೆಂಕಟೇಶ ರಾಯಬಾಗಿ ರವರು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು ಹಾಗೂ ಶ್ರೀಮಠದಲ್ಲಿ ನಡೆಯುವ ನಿತ್ಯ ಅನ್ನದಾಸೋಹಕ್ಕೆ ರೂ.51,000.00 ಗಳನ್ನು ದೇಣಿಗೆಯಾಗಿ ನೀಡಿದರು ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ, ಹಾಗೂ ಶ್ರೀಮಠದ ಮ್ಯಾನೇಜರರಾದ ಶ್ರೀ ಈರಣ್ಣ ಎಸ್. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.